adfly popup

ಕಾಮಶಾಸ್ತ್ರ (ಭಾಗ-2)

ಲೇಖನ: madhuಚಂದ್ರ
ಆಧಾರ: ವಾತ್ಸಾಯನರ ಕಾಮಸೂತ್ರ, ಕಲ್ಯಾಣಮಲ್ಲನ ಅನಂಗರಂಗ, ಅಂತರ್ಜಾಲ ಮತ್ತು ಕೆಲವು ಕಾಮಶಾಸ್ತ್ರದ ಟಿಪ್ಪಣಿಗಳು

ಈ ಲೇಖನದಲ್ಲಿ ಚಿತ್ತಿನಿ ಸ್ತ್ರೀಯ ಬಗ್ಗೆ ಓದೋಣ.

ಚಿತ್ತಿನಿ ಸ್ತ್ರೀ

ಚಿತ್ತಿನಿ ಸಾಮಾನ್ಯವಾಗಿ ಒಬ್ಬ ಮಧ್ಯಮ ಗಾತ್ರದ ಸ್ತ್ರೀಯಾಗಿರುತ್ತಾಳೆ, ಎತ್ತರವೂ ಅಲ್ಲ, ಕುಳ್ಳಗೆಯೂ ಅಲ್ಲ ಎಂಬಂತೆ. ಅವಳ ದೇಹ ತುಂಬಾ ಮೃದು, ಕೊರಳು ಶಂಖದಂತೆ, ಕೂದಲು ಭ್ರಮರದಂತೆ ಕಪ್ಪಗೆ ಇರುತ್ತವಂತೆ. ಅವಳದು ಸಿಂಹಕಟಿ, ಅಂದರೆ ಅವಳ ಸೊಂಟದ ಸುತ್ತಳತೆ ತುಂಬಾ ಕಿರುದಾಗಿರುತ್ತದೆ, ಸಿಂಹದ ಕಟಿಯಂತೆ. ಅವಳ ಸ್ತನಗಳು ಘನವಾಗಿಯೂ ಗಟ್ಟಿಯಾಗಿಯೂ ಇದ್ದು ಅವುಗಳ ನಡುವೆ ಎರಡು ಅಥವ ಮೂರು ಬೆರಳುಗಳ ಅಂತರವಿರುತ್ತದಂತೆ. ಅವಳ ತೊಡೆಗಳು ಬಲು ಆಕರ್ಷಕವಾಗಿದ್ದು, ಅವಳ ನಿತಂಬಗಳು ಕೊಬ್ಬಿದ ಘನಗೋಲಗಳಂತಿರುತ್ತವಂತೆ. ಚಿತ್ತಿನಿಯ ಸುಂದರವಾದ ಯೋನಿಯ ಸುತ್ತಲಿನ ಕೂದಲು ತೆಳ್ಳಗೆ ಹರಡಿಕೊಂಡಿದ್ದು, ಅವಳ ರತಿದಿಬ್ಬವು (ಯೋನಿಯ ಮೇಲೆ, ಕಿಬ್ಬೊಟ್ಟೆಯ ಕೆಳಗೆ ಉಬ್ಬಿಕೊಂಡಂತೆ ಕಾಣುವ ಭಾಗ, ಇಂಗ್ಲೀಷಿನಲ್ಲಿ ಅದನ್ನು mound of venus ಎಂದು ಕರೆಯುತ್ತಾರೆ) ಗಮನ ಸೆಳೆಯುವಂತೆ ಎತ್ತರವಾಗಿ, ದುಂಡಗೆ ಮತ್ತು ತುಂಬಾ ಮೆತ್ತಗೆ ಇರುತ್ತದಂತೆ.

ನಿಮಗೆ ಈ ರತಿದಿಬ್ಬವೆಂದರೇನು ಎಂಬ ಕಲ್ಪನೆ ಈಗಾಗಲೇ ಬಂದಿರದಿದ್ದರೆ ಒಂದು ಚಿತ್ರವನ್ನು ನೀವು ಇಲ್ಲಿ ನೋಡಬಹುದು.

ಚಿತ್ತಿನಿಯ ಭಗಾಂಕುರ (clitoris ) ಯಾವತ್ತೂ ಬಿಸಿಯೇರಿದಂತಿದ್ದು ಜೇನುರಸದ ಕಂಪನ್ನು ಹೊರಸೂಸುತ್ತದಂತೆ. ಸಂಭೋಗದಲ್ಲಿ ನಿರತಳಾಗಿರುವ ಚಿತ್ತಿನಿ ಹೆಣ್ಣಿನ ಯೋನಿಯಿಂದ ಉದ್ರೇಕಕಾರಿ ಶಬ್ದ ಹೊರಡುತ್ತದಂತೆ.

ಚಿತ್ತಿನಿಯ ಕಣ್ಣುಗಳು ಚಂಚಲವಾಗಿದ್ದು ಅವಳು ಮನಸೆಳೆಯುವ ವಯ್ಯಾರದಿಂದ ನಡೆಯುತ್ತಾಳಂತೆ. ಚಿತ್ತಿನಿ ಒಬ್ಬ ಸುಖಲೋಲುಪ ಹೆಣ್ಣು, ಅಂದರೆ ಸುಖಕ್ಕೆ ಮಾರು ಹೋಗುವವಳು ಮತ್ತು ಅವಳಿಗೆ ವೈವಿಧ್ಯತೆಯಲ್ಲಿ ಹೆಚ್ಚು ಆಸಕ್ತಿ. ಆದರೂ ಚಿತ್ತಿನಿ ಸ್ತ್ರೀಯಲ್ಲಿ ಕಾಮಾಸಕ್ತಿ ಕಡಿಮೆಯಂತೆ. ಅವಳಿಗೆ ಕಲೆ, ನರ್ತನ, ಸಂಗೀತದತ್ತ ಒಲವು ಹೆಚ್ಚು, ಪಕ್ಷಿಗಳೆಂದರೆ ಬಲು ಪ್ರೀತಿ, ಮತ್ತು ಅವಳದು ಸಾಧನೆಯ ಪ್ರವೃತ್ತಿಯಂತೆ.

ಇಂದಿಗೆ ಇಷ್ಟೇ ಸಾಕು. ಮುಂದಿನ ಅಂಕಣದಲ್ಲಿ ಶಂಖಿನಿ ಮತ್ತು ಹಸ್ತಿನಿಯರ ಬಗ್ಗೆ ಓದೋಣ.

No comments:

Post a Comment

do you like this blog